ಸತತ 2ನೆ ಬಾರಿ “ಸಾಧನಾ ಪ್ರಶಸ್ತಿ” ಮುಡಿಗೇರಿಸಿಕೊಂಡ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ, ಉಡುಪಿ.

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ, ಉಡುಪಿ. 2023-24 ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಸತತ 2ನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್,ಮಂಗಳೂರು ಇವರಿಂದ ಗುರುತಿಸಲ್ಪಟ್ಟು ದಿನಾಂಕ 14-08-2024 ರಂದು ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಸಮಾರಂಭದಲ್ಲಿ ಬ್ಯಾಂಕಿನ ಗೌರವಾನ್ವಿತ ಅಧ್ಯಕ್ಷರಾದ ಡಾ||ಎಂ.ಎನ್.ರಾಜೇಂದ್ರ ಕುಮಾರ್, ನಿರ್ದೇಶಕರಾದ ಡಾ|| ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಆಡಳಿತ ಮಂಡಳಿ ಸದಸ್ಯರು, ಶ್ರೀಮತಿ ಲಾವಣ್ಯ ಸಹಕಾರ ಸಂಘಗಳ ಉಪನಿಬಂಧಕರು,ಉಡುಪಿ ಜಿಲ್ಲೆ ಉಡುಪಿ, ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಗಣ್ಯ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ.ಲೂವಿಸ್ ಲೋಬೋ ರವರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀ ಸಂದೀಪ್ ಫೆರ್ನಾಂಡೀಸ್ ರವರು ಜಂಟಿಯಾಗಿ “ಸಾಧನಾ ಪ್ರಶಸ್ತಿ” ಯನ್ನು ಸ್ವೀಕರಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಶ್ರೀ ಜೇಮ್ಸ್ ಡಿ’ಸೋಜರವರು ಉಪಸ್ಥಿತರಿದ್ದರು. 1992 ನೇ ಇಸವಿಯಲ್ಲಿ ಆರಂಭಗೊಂಡ ಸಂಘವು ತನ್ನ ಯಶಸ್ವಿ 25ನೇ ವರ್ಷಕ್ಕೆ ಪಾದಾರ್ಪಣೆ ಗೈದಿದೆ. 2023-24 ನೇ ಸಾಲಿನಲ್ಲಿ ರೂ.84.೦೦ ಲಕ್ಷ ನಿವ್ವಳ ಲಾಭಾಂಶವನ್ನು ಗಳಿಸಿ,ತನ್ನೆಲ್ಲಾ ಸದಸ್ಯರಿಗೆ ಶೇಕಡಾ 17 ರಷ್ಟು ಡಿವಿಡೆಂಡನ್ನು ಮಂಜೂರು ಮಾಡಲಾಗಿದೆ. ಉಡುಪಿ ಸುಪರ್ ಬಜಾರ್ ನಲ್ಲಿ ಆಡಳಿತ ಕಚೇರಿಯನ್ನು ಹೊಂದಿರುವ ಸಂಸ್ಥೆಯು ಉಡುಪಿ,ಮಲ್ಪೆ,ಉದ್ಯಾವರ ಹಾಗೂ ಶಿರ್ವದಲ್ಲಿ ಈಗಾಗಲೇ ಶಾಖೆಗಳನ್ನು ಹೊಂದಿದ್ದು, ನೂತನ ಹೂಡೆ-ಕೆಮ್ಮಣ್ಣು ಶಾಖೆಯು ದಿನಾಂಕ 31-08-2024 ರಂದು ಉದ್ಘಾಟನೆ ಗೊಳ್ಳಲಿದೆ.ಈ ಸಾಧನೆಯನ್ನು ಮಾಡುವಲ್ಲಿ ಸಹಕರಿಸಿದ ಸಂಘದ ನೆಚ್ಚಿನ ಆಡಳಿತ ಮಂಡಳಿ ನಿರ್ದೇಶಕರಿಗೂ ಸದಸ್ಯರಿಗೂ,ಗ್ರಾಹಕರಿಗೂ, ಹಿತೈಷಿಗಳಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಅಧ್ಯಕ್ಷರು ಧನ್ಯವಾದವನ್ನು ಸೂಚಿಸಿರುತ್ತಾರೆ.

Leave a Comment

Your email address will not be published. Required fields are marked *